ಆರ್ ಜಿ ವಿ ಶಿಷ್ಯನ `ಒಂದು ರೊಮ್ಯಾಂಟಿಕ್ ಕ್ರೈಂ ಕಥೆ`
Posted date: 25 Mon, Nov 2013 – 04:42:34 PM

ಭಾರತೀಯ ಸಿನೆಮಾದ ಅತ್ಯಂತ ಪ್ರಸಿದ್ದ ಹೆಸರು ರಾಮ್ ಗೋಪಾಲ್ ವರ್ಮ. ಅವರ ಶಿಷ್ಯಂದಿರ ದಂಡು ಬಹಳವೆ ಇದೆ. ಅದರಲ್ಲಿ ಒಬ್ಬ ಶಿಷ್ಯ ಶಶುನರಾಜು ನಾಯಕುಲ ರೀಮೇಕ್ ಸಿನೆಮಾದೊಂದಿಗೆ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ರಾಮ್ ಗೋಪಾಲ್ ವರ್ಮ ಅವರ ‘ಸತ್ಯ-2’ ಸಿನೆಮಾದಲ್ಲಿ ಅಸೋಸಿಯೇಟ್ ನಿರ್ದೇಶಕರದ ಶಶುನರಾಜು ನಾಯಕುಲ ಅವರು ಕನ್ನಡಲ್ಲಿ ಸ್ವತಂತ್ರ ನಿರ್ದೇಶಕರಾಗಿ ಆಗಮಿಸುತ್ತಿದ್ದಾರೆ.

ತೆಲುಗು ಭಾಷೆಯಲ್ಲಿ ಜನಪ್ರಿಯತೆ ಪಡೆದ ‘ಓಕ ರೊಮ್ಯಾಂಟಿಕ್ ಕ್ರೈಂ ಕಥಾ’ ಕನ್ನಡದಲ್ಲಿ ‘ಒಂದು ರೊಮ್ಯಾಂಟಿಕ್ ಕ್ರೈಂ ಕಥೆ’ ಆಗಿ ಸೆಟ್ಟೇರುತ್ತಿದೆ.

ಆಂಧ್ರ ಪ್ರದೇಶದಲ್ಲಿ ಹೆಸರಾದ ಉಧ್ಯಮಿ ಡಾಕ್ಟರ್ ಮಲಿನೇಣಿ ಲಕ್ಷ್ಮಯ್ಯ ಅವರು ‘ಮಲಿನೇಣಿ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್’ ಅಡಿಯಲ್ಲಿ ಈ ಚಿತ್ರವನ್ನು ಕನ್ನಡದಲ್ಲಿ ತಯಾರಿಸುತ್ತಿದ್ದಾರೆ. ಮಲಿನೇಣಿ ಇನ್ಸ್ಟಿಟ್ಯೂಟ್ ಆಫ್ ಇಂಜಿನೀರಿಂಗ್, ಟೆಕ್ನಾಲಜಿ, ಮೆಡಿಸಿನ್ ಅವರ ನೇತೃತ್ವದಲ್ಲಿ ಜನಪ್ರಿಯತೆ ಪಡೆದಿದೆ.

ಈ ಚಿತ್ರದ ಕಥಾ ಹಂದರ ಇಂದಿನ ಸಾಮಾಜಿಕ ಬದುಕಿಗೆ ಸಂಬಂದಪಟ್ಟ ವಿಚಾರ ಆಗಿದೆ. ದೂರದ ಊರುಗಳಿಂದ ಶ್ರೀಮಂತ ಮನೆತನದ ಮಕ್ಕಳು ವಿಧ್ಯೆಗಾಗಿ ಬೇರೆ ರಾಜ್ಯಗಳಿಗೆ ಬಂದು ಸಹವಾಸವನ್ನು ಬದಲಿಸಿಕೊಂಡು ಮೋಜು, ಮಸ್ತಿಯಲ್ಲಿ ತೊಡಗಿಕೊಂಡು ಸಮಾಜಕ್ಕೆ ಒಂದು ಪಿಡುಗಾಗಿ ಬಿಡುವುದು ಈ ಚಿತ್ರದ ಎಳೆ.

ಶಶುನರಾಜ್ ಅವರು ಈ ಹಿಂದೆ ‘1940ಲೋ ಓಕ ಗ್ರಾಮಮ್’ ಎಂಬ ತೆಲುಗು ಸಿನೆಮಕ್ಕೆ ಸಹಾಯಕ ನಿರ್ದೇಶಕರಾಗಿ ದುಡಿದ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭ್ಯವಾಗಿತ್ತು.  ಪ್ರಭುದೇವ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಒದಗಿಸಲಿದ್ದಾರೆ.  ಕಲಾವಿದರ ಆಯ್ಕೆ ಪ್ರಕ್ರಿಯೆ ಇದೀಗ ಪ್ರಾರಂಭವಾಗಿದೆ.

ಸಿನೆಮದಲ್ಲಿ ಅಭಿನಯಿಸಲು ಇಚ್ಛೆ ಇರುವರರು malineniproductions@gmail.com ಅನ್ನು ಸಂಪರ್ಕಿಸಬಹುದು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed